Agricultural Dilpoma Institute, Kathalagere

DIPLOMA COLLEGE PRINCIPAL DR BM ANANDKUMAR

Dr.B.M. Ananda Kumar

                 M.Sc. (Agri.), Ph.D

Principal Diploma (Agri). College Kathalagere

University of Agricultural and Horticultural sciences,

Shimoga, Karnataka, India

 : [email protected]

: 08180-273795/ 273790

:9480838974

Profile: Dr.B.M. Ananda Kumar


ಡಿಪ್ಲೊಮಾ (ಕೃಷಿ) ಮಹಾವಿದ್ಯಾಲಯದ ಕತ್ತಲಗೆರೆ

ದಿನಾಂಕ 22-11-2011 ಕರ್ನಾಟಕ ಸರ್ಕಾರದ ಆದೇಶದಂತೆ ಎರಡು ವರ್ಷದ ಡಿಪ್ಲೊಮಾ (ಕೃಷಿ) ಮಹಾವಿದ್ಯಾಲಯವು 2011-12 ವರ್ಷದಲ್ಲಿ ಪ್ರಾರಂಭವಾಗಿ,ಪ್ರತಿ ವರ್ಷ 50 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಪ್ರವೇಶಾತಿಗೆ ಅರ್ಜಿ : ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಡಿಪ್ಲೊಮಾ ಕೃಷಿ ಪ್ರವೇಶಕ್ಕೆ ಅರ್ಜಿ ವಿತರಿಸಲಾಗುತ್ತದೆ ಅಥವಾ ವಿಶ್ವವಿದ್ಯಾಲಯದ ವೆಬ್ಸೈಟ್ನಿಂದ ಸಹಡೌನ್ಲೋಡ್ ಮಾಡಿಕೊಳ್ಳಬಹುದು

ಘನ ಕರ್ನಾಟಕ ಸರ್ಕಾರವು ಡಿಪ್ಲೊಮಾ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 1,000/- ದಂತೆ ಪ್ರತಿ ವಿದ್ಯಾರ್ಥಿಗೆ ವಿದ್ಯಾರ್ಥಿವೇತನವನ್ನುನೀಡಲಾಗುತ್ತಿದೆ.

ಎರಡು ವರ್ಷದ ಡಿಪ್ಲೊಮಾ (ಕೃಷಿ)ಗೆ ಸೇರ ಬಯಸುವ ವಿದ್ಯಾರ್ಥಿಗಳು ಒಟ್ಟು 4 ಸೆಮಿಸ್ಟರ್ ಅವಧಿಯಲ್ಲಿ 62 ಅಭ್ಯಾಸದ ಅವಧಿ ಗಂಟೆಗಳಲ್ಲಿ ಕಲಿಯಬೇಕಾಗಿರುತ್ತದ. ಅಂದರೆ ಅದರಲ್ಲಿ ಬೆಳೆ ಉತ್ಪಾದನೆ (20 ಅಭ್ಯಾಸದ ಅವಧಿ ಗಂಟೆಗಳಲ್ಲಿ), ಸಸ್ಯ ಸಂರಕ್ಷಣೆ (7 ಅಭ್ಯಾಸದ ಅವಧಿ ಗಂಟೆಗಳಲ್ಲಿ), ಕೃಷಿ ಇಂಜಿನಿಯರಿಂಗ್-ಕೊಯ್ಲಿನೋತ್ತರ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ (6 ಅಭ್ಯಾಸದ ಅವಧಿ ಗಂಟೆಗಳಲ್ಲಿ), ಸಸ್ಯ ವಿಜ್ಞಾನ / ಬೆಳೆ ಸುಧಾರಣೆ (5 ಅಭ್ಯಾಸದ ಅವಧಿ ಗಂಟೆಗಳಲ್ಲಿ),ಸಮಾಜಿಕ ವಿಜ್ಞಾನ (7 ಅಭ್ಯಾಸದ ಅವಧಿ ಗಂಟೆಗಳಲ್ಲಿ), ಗ್ರಾಮೀಣ ಕೆಲಸದ ಅನುಭವ (4 ಅಭ್ಯಾಸದ ಅವಧಿ ಗಂಟೆಗಳಲ್ಲಿ), ಶೈಕ್ಷಣಿಕ ಪ್ರವಾಸ ( 1 ಅಭ್ಯಾಸದ ಅವಧಿಗಂಟೆಗಳಲ್ಲಿ) ಮತ್ತು ಅನುಭವ ಆಧಾರಿತ ಕಲಿಕೆ (12 ಅಭ್ಯಾಸದ ಅವಧಿ ಗಂಟೆಗಳಲ್ಲಿ) ಹಾಗೂ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿರುತ್ತವೆ.

ಈಗಾಗಲೇ 3 ಬ್ಯಾಚ್ ವಿದ್ಯಾರ್ಥಿಗಳು ಡಿಪ್ಲೊಮಾ (ಕೃಷಿ)ವನ್ನು ಮುಗಿಸಿರುತ್ತಾರೆ. ಅಂದರೆ ಸುಮಾರು ೧೪೪ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಇವರುಗಳಲ್ಲಿ ಕೆಲಅಭ್ಯರ್ಥಿಗಳು ಸರ್ಕಾರೇತರ ಸಂಸ್ಥೆಗಳಲ್ಲಿ ಹಾಗೂ ಸ್ವಂತ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇನ್ನಿತರರು ಬಿ.ಎಸ್ಸಿ. (ಕೃಷಿ)ಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಡಿಪ್ಲೊಮಾ (ಕೃಷಿ) ಮಹಾವಿದ್ಯಾಲಯದಲ್ಲಿ ಪ್ರತ್ಯೇಕವಾಗಿ ಸುಸಜ್ಜಿತ ಬಾಲಕರ ವಿದ್ಯಾರ್ಥಿನಿಲಯ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯವಿದ್ದು, ಊಟದ ವ್ಯವಸ್ಥೆಯುಸಹ ಲಭ್ಯವಿರುತ್ತದೆ.

ಡಿಪ್ಲೊಮಾ (ಕೃಷಿ) ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪ್ರಯೋಗಾಲಯ, ಗ್ರಂಥಾಲಯ, ಗಣಕ ಪ್ರಯೋಗಾಲಯ ಹಾಗೂ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿಬೆಳೆಗಳನ್ನು ಬೆಳೆಯಲು ಪ್ರತ್ಯೇಕ ತಾಕುಗಳನ್ನು ಸಹ ನೀಡಲಾಗಿದೆ.

ಡಿಪ್ಲೊಮಾ (ಕೃಷಿ) ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಪ್ರಾಯೋಗಿಕವಾಗಿ ಕ್ಷೇತ್ರ ವೀಕ್ಷಣೆ, ಬೀಜ ನಿಗಮ, ಆಹಾರ ಕಾರ್ಖಾನೆ ಮತ್ತು ಗ್ರಾಮೀಣ ಕೃಷಿಯಲ್ಲಿ ಕೆಲಸದಅನುಭವದ ತರಬೇತಿ ಪಡೆಯಲು ಬಸ್ಸಿನ ಸೌಕರ್ಯವನ್ನು ಸಹ ಕಲ್ಪಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಪ್ರಾಂಶುಪಾಲರು

ಡಿಪ್ಲೊಮಾ(ಕೃಷಿ) ಕಾಲೇಜು

ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕತ್ತಲಗೆರೆ

ಚನ್ನಗಿರಿ (ತಾ.), ದಾವಣಗೆರೆ (ಜಿಲ್ಲೆ) ಮೊ: 98808 38974

ದೂರವಾಣಿ : 08180-273795/273790

Email: diplomakathalage[email protected]