Agricultural Diploma Institute, Brahmavar

ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ ಬ್ರಹ್ಮಾವರ, ಉಡುಪಿ ಜಿಲ್ಲೆ

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ಅಡಿಯಲ್ಲಿ ಡಿಪ್ಲೊಮಾ (ಕೃಷಿ) ವಿದ್ಯಾಲಯ, ಬ್ರಹ್ಮಾವರವು ಕರ್ನಾಟಕ ರಾಜ್ಯ ಪತ್ರದ ಸಂ:ಸಂ.ವ್ಯಶ.ಇ 19 ಶಾಸನ 2012, ಬೆಂಗಳೂರು, ದಿನಾಂಕ: 21.09.2013 ಪ್ರಕಟಗೊಂಡಂತೆ ದಿನಾಂಕ: 26-07-2014 ರಿಂದ ಕಾನೂನು ಬದ್ದವಾಗಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರದ ಆವರಣದಲ್ಲಿ ಪ್ರಾರಂಭಗೊಂಡಿತು.

ಬೋಧನಾ ಮಾಧ್ಯಮ : ಕನ್ನಡ

ಅವಧಿ : ಎರಡು ವರ್ಷಗಳು (ನಾಲ್ಕು ಷಣ್ಮಾಸಿಕಗಳು)

ಪ್ರತಿ ವರ್ಷ 50 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗುತ್ತಿದೆ

ಪ್ರವೇಶಾತಿಗೆ ಅರ್ಜಿ : ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಡಿಪ್ಲೊಮಾ ಕೃಷಿ ಪ್ರವೇಶಕ್ಕೆ ಅರ್ಜಿ ವಿತರಿಸಲಾಗುತ್ತದೆ ಅಥವಾ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದು. ಜುಲೈನಲ್ಲಿ ಮೊದಲ ಷಣ್ಮಾಸಿಕದ ತರಗತಿಗಳು ಪ್ರಾರಂಭಗೊಳ್ಳುತ್ತದೆ.

ಅರ್ಹತೆ : ಕನಿಷ್ಠ ಶೇ. 45 ಅಂಕಗಳೊಂದಿಗೆ ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣ 19 ವರ್ಷ ಮೀರಿರಬಾರದು.

ಆಯ್ಕೆ ವಿಧಾನ : ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಡೆದ ಶೇಕಡವಾರು ಅಂಕಗಳ ಜೇಷ್ಠತೆಯ ಮೇರೆಗೆ ಮೀಸಲಾತಿ ಅನ್ವಯ ಸೀಟುಗಳ ವಿತರಣೆ ಮಾಡಲಾಗುವುದು. ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇಕಡಾ ೪೦ರಷ್ಟು ಮೀಸಲಾತಿ.

ವಸತಿ ಸೌಲಭ್ಯ : ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತವಾದ ವಿದ್ಯಾರ್ಥಿನಿಲಯಗಳ  ವ್ಯವಸ್ಥೆ ಇರುತ್ತದೆ.

ವಿದ್ಯಾರ್ಥಿ ವೇತನ : ೨ ವರ್ಷ ಅವಧಿಗೆ ತಿಂಗಳಿಗೆ ರೂ.೧೦೦೦/-

ವಿದ್ಯಾರ್ಜನೆಗೆ ಸೌಲಭ್ಯಗಳು :  – ಸುಸಜ್ಜಿತವಾದ ಕಾಲೇಜು ಕಟ್ಟಡ

– ಸುಸಜ್ಜಿತವಾದ ಪ್ರಯೋಗಾಲಯಗಳು

– ನುರಿತ ವಿಜ್ಞಾನಿಗಳಿಂದ ಬೋಧನೆ

– ಪ್ರಾಯೋಗಿಕವಾದ ಮತ್ತು ಪ್ರಾತ್ಯಕ್ಷಿಕೆಗಳಿಂದ ಕೂಡಿದ ಬೋಧನೆ

ಮತ್ತು ಕಲಿಕೆಗೆ ಮಹತ್ವ ನೀಡಲಾಗಿದೆ.

-ಕರಾವಳಿ ವಲಯದ 350 ಎಕರೆಯಷ್ಟು ವಿಶಾಲವಾದ ವಿಸ್ತೀರ್ಣವನ್ನು ಹೊಂದಿದ ಸಸ್ಯಸಂಪದ್ಭರಿತ ಪ್ರಕೃತಿ ಮಡಿಲಲ್ಲಿರುವ ಡಿಪ್ಲೋಮಾ (ಕೃಷಿ) ಕಾಲೇಜು, ಬ್ರಹ್ಮಾವರ ಆವರಣ ಉಡುಪಿಯಿಂದ ಸುಮಾರು 12 ಕಿಲೋ ದೂರದಲ್ಲಿರುತ್ತದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ;

ಪ್ರಾಂಶುಪಾಲರು

ಡಿಪ್ಲೊಮಾ (ಕೃಷಿ)ವಿದ್ಯಾಲಯ, ಬ್ರಹ್ಮಾವರ -576 213 ಉಡುಪಿ

ದೂರವಾಣಿ  ಸಂಖ್ಯೆ: 0820-256 0411   ಮೊಬೈಲ್ ಸಂಖ್ಯೆ : 94808 38208

ಇ-ಮೈಲ್‌ವಿಳಾಸ: [email protected]